Wednesday, July 8, 2015

ಬ್ಲಾಸ್ಟ್ - 8



ಅಭಿಮನ್ಯುವಿಗೆ ಮುಂದೆ ಹೇಗೆ ಎಂದು ಒಂದು ಕಡೆ ಆದರೆ ಮತ್ತೊಂದು ಕಡೆ ದಾಳಿಯ ವಿಷಯ ಅವನಿಗೆ ತಿಳಿದದ್ದಾದರೂ ಹೇಗೆ ಎಂದು ಗೊಂದಲದಲ್ಲಿದ್ದನು. ಒಂದು ವೇಳೆ ತಮ್ಮವರೇ ಯಾರಾದರೂ ಅವನೊಂದಿಗೆ ಕೈ ಜೋಡಿಸಿದ್ದಾರ? ಛೇ... ಛೇ ಹಾಗಾಗಿರಲು ಸಾಧ್ಯವಿಲ್ಲ... ಹ್ಮ್... ಅದು ಹೇಗಾದರೂ ಆಗಲಿ, ಈಗ  ಪ್ರಯೋಜನವಿಲ್ಲ... ಮುಂದೆ ಏನು ಎಂಬುದೇ ಸವಾಲು..  ಮಂತ್ರಿಗಳು ಬೇರೆ ಯಾವುದೇ ಕಾರ್ಯಾಚರಣೆ ಮಾಡಬೇಡ ಎಂದು ಹೇಳಿದ್ದಾರೆ... ಅಂದರೆ ಅವನೆದುರು ಸೋಲು ಒಪ್ಪಿಕೊಳ್ಳುವುದೇ... ಛಾನ್ಸೇ ಇಲ್ಲ.. ಸರ್ಕಾರಕ್ಕೆ ಗೊತ್ತಾಗದೆ ಒಂದು ಕಾರ್ಯಾಚರಣೆ ಮಾಡಬೇಕು... ಆದರೆ ಹೇಗೆ ಎಂದು ಯೋಚಿಸುತ್ತಿರುವಾಗಲೇ ಸೂಪರ್ ಕಾಪ್ ಭಗತ್ ಸಿಂಗ್ ನೆನಪಾಯಿತು.. ಹೌದು ಇದಕ್ಕೆ ಅವನೇ ಸರಿ ಎಂದು ಅವನಿಗೆ ಕರೆ ಹಚ್ಚಿದ.

ಭಗತ್ ಸಿಂಗ್ ಹೆಸರು ಕೇಳಿದರೆ ಅಪರಾಧಿಗಳಿಗೆ ನಡುಕ ಹುಟ್ಟುತ್ತಿತ್ತು, ಸಿಂಹಸ್ವಪ್ನವಾಗಿದ್ದ... ಅಂಥಹ ಅಧಿಕಾರಿ ತನ್ನದೇ ಡಿಪಾರ್ಟ್ಮೆಂಟ್ ನಲ್ಲಿ ನಡೆಯುತ್ತಿದ್ದ ರಾಜಕೀಯವನ್ನು ಸಹಿಸಲಾರದೆ ರಾಜೀನಾಮೆ ನೀಡಿ ಮತ್ತೆ ತನ್ನ ಊರಾದ ಪಂಜಾಬ್ ಗೆ ಹೊರಟು ಹೋಗಿದ್ದ. ಈಗ ದಿಢೀರ್ ಎಂದು ಅಭಿಮನ್ಯು ಕರೆ ಮಾಡಿದ್ದು ನೋಡಿ ಆಶ್ಚರ್ಯದಿಂದ ಏನು ದೋಸ್ತ್ ಇಷ್ಟು ದಿನ ಆದ ಮೇಲೆ ಸಿಂಗ್ ನೆನಪಾಯಿತ? ಹೇಗಿದ್ದೀಯ? ಏನಂತಾರೆ ನಿಮ್ಮ ಡಿಪಾರ್ಟ್ಮೆಂಟ್ ನವರು... ಇನ್ನೂ ಅದೇ ಹೊಲಸು ರಾಜಕೀಯದ ಆಟಗಳನ್ನು ಆಡುತ್ತಿದ್ದಾರ ಅಥವಾ ಏನಾದರೂ ಸುಧಾರಣೆ ಬಂದಿದೆಯ?

ಭಗತ್ ಸಣ್ಣ ಪುಟ್ಟ ತರಲೆಗಳು ಇದ್ದಿದ್ದೆ... ಆದರೆ ನಿನ್ನ ರಾಜೀನಾಮೆ ನಂತರ ಬಹಳಷ್ಟು ಬದಲಾವಣೆಗಳು ಆಗಿದೆ. ನಿನ್ನ ರಾಜೀನಾಮೆಯ ಪ್ರಭಾವದಿಂದ ಸುಮಾರು ಭ್ರಷ್ಟ ಅಧಿಕಾರಿಗಳನ್ನು ಮನೆಗೆ ಕಳಿಸಲಾಯಿತು.

ಮತ್ತೆ ಇನ್ನೇನು ಅಭಿ ಸಮಾಚಾರ? ಅಪರೂಪಕ್ಕೆ ಕರೆ ಮಾಡಿದೀಯ...

ಭಗತ್ ನಿನ್ನ ಬಳಿ ಒಂದು ವಿಷಯ ಮಾತಾಡಬೇಕಿತ್ತು...

ಅಭಿ, official ಆದರೆ ದಯವಿಟ್ಟು ಹೇಳಬೇಡ... ನಿನ್ನ personnel ಏನಾದರೂ ಇದ್ದರೆ ಹೇಳು.

ಭಗತ್.... ಇದೊಂದು official ವಿಷಯಕ್ಕೆ ಸಂಬಂಧ ಪಟ್ಟಿದ್ದೇ...

ಹಾಗಿದ್ದರೆ ದಯವಿಟ್ಟು ನನಗೆ ಹೇಳಬೇಡ ಬೈ ಎಂದು ಫೋನ್ ಕಟ್ ಮಾಡಿಬಿಟ್ಟರು.

ಮತ್ತೊಮ್ಮೆ ಡಯಲ್ ಮಾಡಿದ ಅಭಿಗೆ ನಿರಾಸೆ ಕಾದಿತ್ತು. ಭಗತ್ ಸಿಂಗ್ ಕರೆಯನ್ನು ಸ್ವೀಕರಿಸಲಿಲ್ಲ. ಆದರೂ ಛಲ ಬಿಡದ ತ್ರಿವಿಕ್ರಮನಂತೆ ಪದೇ ಪದೇ ಕರೆ ಮಾಡಿದ ಅಭಿಗೆ ಕೊನೆಗೂ ಫಲಿತಾಂಶ ದೊರಕಿತು. ಭಗತ್.... ಒಂದೇ ಒಂದು ಸಲ ನಾನು ಹೇಳುವ ವಿಷಯ ಕೇಳು... ಆಮೇಲೆ ನಿನ್ನಿಷ್ಟ ನಿನ್ನದು... ನಾನು ನಿನ್ನನ್ನು ಬಲವಂತ ಮಾಡುವುದಿಲ್ಲ... ಪ್ಲೀಸ್.
ಸರಿ ಹೇಳು ಅದೇನು ವಿಷಯ..

ಅಭಿ ನಡೆದ ವಿಷಯವನ್ನೆಲ್ಲಾ ತಿಳಿಸಿ, ಭಗತ್ ಕಾರ್ಯಾಚರಣೆಯಲ್ಲಿ ನನಗೆ ನಿನ್ನ ಸಹಾಯ ಬೇಕಿದೆ. ಇದು ಲೆಕ್ಕಕ್ಕೆ official ಕೆಲಸ ಆದರೂ ನಾನು ಕಾರ್ಯಾಚರಣೆಯನ್ನು ರಹಸ್ಯವಾಗಿ ಮಾಡಬೇಕು ಎಂದು ನಿರ್ಧಾರ ಮಾಡಿದ್ದೇನೆ. ಯಾವುದೇ ಕಾರಣಕ್ಕೂ ದುಷ್ಕರ್ಮಿಯನ್ನು ಸುಮ್ಮನೆ ಬಿಡಲು ನನಗೆ ಇಷ್ಟವಿಲ್ಲ. ಸರ್ಕಾರದ ಮಾತನ್ನು ನಂಬಿ ಕೂತರೆ ನಾವು ಹೇಡಿಗಳಂತೆ ಅವರಿಗೆ ದುಡ್ಡು ಕೊಟ್ಟು ಒತ್ತೆಯಾಳುಗಳನ್ನು ಬಿಡಿಸಿಕೊಂದು ಬರಬೇಕು... ಅದು ನನಗೆ ಇಷ್ಟವಿಲ್ಲ...ಮತ್ತು ಯಾವಾಗ ದಾಳಿ ವಿಷಯ ಅವನಿಗೆ ತಿಳಿಯಿತೋ ಆಗಿನಿಂದ ನನ್ನ ಜೊತೆಯವರ ಮೇಲೆ ನನಗೆ ನಂಬಿಕೆ ಹೊರಟು ಹೋಗಿದೆ.... ನಾನೀಗ ಯಾರನ್ನೂ ನಂಬುವ ಸ್ಥಿತಿಯಲ್ಲಿ ಇಲ್ಲ.. ಅದಕ್ಕೆ ನಿನ್ನ ಸಹಾಯ ಕೇಳಿ ಕರೆ ಮಾಡಿದೆ... ನೀನು ನನಗೆ ನಿರಾಶೆ ಮಾಡುವುದಿಲ್ಲ ಎಂದು ನಂಬುತ್ತೇನೆ...

ಅಭಿ ನಾನು ಈಗಲೇ ಏನೂ ಹೇಳಲು ಸಾಧ್ಯವಿಲ್ಲ... ನನಗೆ ಸ್ವಲ್ಪ ಸಮಯ ಬೇಕು...

ಭಗತ್ ನಮ್ಮ ಬಳಿ ಹೆಚ್ಚು ಸಮಯವಿಲ್ಲ.... ನಾವು ತಡ ಮಾಡಿದಷ್ಟೂ ಒತ್ತೆ ಇರುವ ಮಕ್ಕಳ ಜೀವಕ್ಕೆ ಅಪಾಯವಿದೆ....
ಸರಿ ಅಭಿ ನನಗೆ ಒಂದು ಗಂಟೆ ಸಮಯ ಕೊಡು, ಅಷ್ಟರಲ್ಲಿ ನಾನು ಯೋಚನೆ ಮಾಡಿ ತಿಳಿಸುತ್ತೇನೆ....

ಥ್ಯಾಂಕ್ಸ್ ಭಗತ್... ಎಂದು ಕರೆ ಕಟ್ ಮಾಡಿ ಮತ್ತೆ ಭಗತ್ ಕರೆಗೋಸ್ಕರ ಕಾಯುತ್ತ ನಿಂತ ಅಭಿ.

ಸರಿಯಾಗಿ ಒಂದು ಗಂಟೆಯ ನಂತರ ಕರೆ ಮಾಡಿದ ಭಗತ್, ಅಭಿ ನಾನು ನಿನಗೆ ಸಹಾಯ ಮಾಡುತ್ತೇನೆ, ಆದರೆ official ಆಗಿ ಅಲ್ಲ, ನಿನ್ನ ಮೇಲಿನ ಸ್ನೇಹಕ್ಕೋಸ್ಕರ ಅಷ್ಟೇ... ಕೆಲಸ ಮುಗಿದ ಮೇಲೂ ಅಷ್ಟೇ ಎಲ್ಲೋ ನನ್ನ ಹೆಸರು ಬರಬಾರದು ಏನು ನೀನು ಭರವಸೆ ಕೊಡುವುದಾದರೆ ಮಾತ್ರ ನಾನು ನಿನಗೆ ಸಹಾಯ ಮಾಡುತ್ತೇನೆ... ನನಗೆ ನಿನ್ನ ಸರ್ಕಾರ ಕೊಡುವ ಯಾವುದೇ ಗೌರವವೂ ಬೇಕಿಲ್ಲ.

ಭಗತ್ ಅದನ್ನು ನಾನು ನೋಡಿಕೊಳ್ಳುತ್ತೇನೆ.... ನೀನು ಸಹಾಯ ಮಾಡಲು ಒಪ್ಪಿದೆಯಲ್ಲ ತುಂಬಾ ಥ್ಯಾಂಕ್ಸ್... ಈಗ ನೀನು ಮಾಡಬೇಕಿರುವುದು ಏನೆಂದರೆ ಕೂಡಲೇ ಶ್ರೀಲಂಕಾಗೆ ಹೊರಟು ಅಲ್ಲಿ ಪೋರ್ಟಿನ ಬಳಿ ಎಲ್ಲಾದರೂ ಜಾಗ ಮಾಡಿ ಯಾವುದಾದರೂ ಅನುಮಾನಾಸ್ಪದ ವ್ಯಕ್ತಿಗಳು ಕಂಡರೆ ಅವರ ನಡುವಳಿಕೆಗಳನ್ನು ಗಮನಿಸಿ ನನಗೆ ಮಾಹಿತಿ ಕೊಟ್ಟರೆ ನಾನು ಇಲ್ಲಿಂದ ಹಣವನ್ನು ಸಿದ್ಧ ಮಾಡಿಕೊಂಡು ಅಲ್ಲಿಗೆ ಬರುವ ವ್ಯವಸ್ಥೆ ಮಾಡುತ್ತೇನೆ... ಮುಂದಿನ ವಿಷಯ ನಿನಗೆ ಗೊತ್ತೇ ಇದೆ.. ಯಾವುದೇ ಕಾರಣಕ್ಕೂ ಹಣ ಅವನಿಗೆ ಸೇರಬಾರದು ಮತ್ತು ಒಂದೇ ಒಂದು ಮಗುವಿನ ಜೀವಕ್ಕೂ ಯಾವ ರೀತಿಯ ಹಾನಿಯೂ ಆಗ ಬಾರದು.

ಹಾಗೆ ಆಗಲಿ ಅಭಿ, ನಾನು ಕೂಡಲೇ ಶ್ರೀಲಂಕಾಗೆ ಹೊರಡುತ್ತೇನೆ.

No comments:

Post a Comment