Sunday, July 5, 2015

ಬ್ಲಾಸ್ಟ್ - 6



ವಿಜಯ್, ದುಷ್ಕರ್ಮಿಗಳು ಏನೂ ಅರಿಯದ ಪುಟ್ಟ ಕಂದಮ್ಮಗಳನ್ನು ಅಡ್ಡ ಇಟ್ಟುಕೊಂಡು ಬೆದರಿಕೆ ಒಡ್ಡುತ್ತಿದ್ದಾರೆ. ಅದೂ ಅಲ್ಲದೆ ೫೦೦ ಮಿಲಿಯನ್ ಡಾಲರ್ ಎಂದರೆ ತಮಾಷೆ ಎಂದುಕೊಂಡು ಬಿಟ್ಟಿದ್ದಾರೆ... ಛೇ...ಬಾಸ್ಟರ್ಡ್ಸ್... ಇವರಿಗೆ ಸರಿಯಾಗೇ ಪಾಠ ಕಲಿಸಬೇಕು ಎಂದುಕೊಂಡು ಕೂಡಲೇ IGಗೆ ಕರೆ ಮಾಡಿ ನಡೆದ ವಿಷಯವನ್ನು ತಿಳಿಸಿ, ಸರ್ ಕೂಡಲೇ ಗೃಹಮಂತ್ರಿಗಳ ಜೊತೆ ಒಂದು ಮೀಟಿಂಗ್ ಅರೇಂಜ್ ಮಾಡಿ ಸರ್... ನಾನು ಮತ್ತು ವಿಜಯ್ ಈಗಲೇ ಹೊರಟು ಬರುತ್ತೇವೆ ಎಂದು ಕರೆ ಕಟ್ ಮಾಡಿ IG ಆಫೀಸ್ ಗೆ ಹೊರಟರು.

ದಾರಿಯಲ್ಲಿ ಹೋಗುತ್ತಿದ್ದಾಗ ಹಿಂದಿನ ಘಟನೆಗಳೆಲ್ಲ ನೆನಪಿಗೆ ಬಂದವು. ಹಿಂದೆಯೂ ಎಷ್ಟೋ ಜನ ದುಷ್ಕರ್ಮಿಗಳು ಹಣದ ಆಸೆಗೆ ಹೀಗೆ ಮಕ್ಕಳನ್ನು ಕಿಡ್ನಾಪ್ ಮಾಡುವುದು, ಇಲ್ಲವಾದಲ್ಲಿ ಪ್ರತಿಷ್ಠಿತ ವ್ಯಕ್ತಿಗಳನ್ನು ಒತ್ತೆಯಾಳಾಗಿ ಇರಿಸಿಕೊಳ್ಳುವುದು ಎಲ್ಲಾ ಮಾಡುತ್ತಿದ್ದರು... ಆದರೆ ಈಗ ಒಂದು ಕಡೆ ವೈಜ್ಞಾನಿಕವಾಗಿ ದಾಳಿ ಮಾಡಿ ಎಷ್ಟೋ ಜನ ಅಮಾಯಕರ ಪ್ರಾಣ ತೆಗೆದಿದ್ದಾರೆ, ಮತ್ತೆ ಈಗ ಪುಟ್ಟ ಕಂದಮ್ಮಗಳು... Damn it...

IG ಆಫೀಸ್ ತಲುಪುವ ಹೊತ್ತಿಗೆ ಕಮಿಷನರ್ ಸಹ ಹಾಜರಿದ್ದರು. ಎಲ್ಲರೂ ಸೇರಿ ಗೃಹಮಂತ್ರಿಗಳ ಕಛೇರಿಗೆ ಹೋಗಿ ಘಟನೆಯ ಸಂಪೂರ್ಣ ವಿಷಯವನ್ನು ಅವರಿಗೆ ಒಪ್ಪಿಸಿ, ಸರ್ ಈಗ ನಾವು ಹೇಗಾದರೂ ಮಾಡಿ ಮಕ್ಕಳನ್ನು ರಕ್ಷಿಸಲೇಬೇಕು... ಅದೇ ಸಮಯದಲ್ಲಿ ದುಷ್ಕರ್ಮಿಗಳನ್ನು ಬಂಧಿಸಲೇಬೇಕು.. ಅದಕ್ಕೆ ನನಗೆ ಒಂದು ವಿಶೇಷ ಪೋಲಿಸ್ ದಳ ಮತ್ತು ಒಂದಷ್ಟು ಸ್ಪೆಷಲ್ ಫೋರ್ಸ್ ಬೇಕು.

ಅಭಿಮನ್ಯುವಿನ ಮಾತಿನ ಮಧ್ಯದಲ್ಲಿ ತಡೆದ ಮಂತ್ರಿಗಳು, ಅದೆಲ್ಲ ಕೊಡೋಣ ಆದರೆ ಯಾವುದೇ ಕಾರಣಕ್ಕೂ ಒಂದೇ ಒಂದು ಪ್ರಾಣ ಹಾನಿ ಆಗಬಾರದು, ಯಾಕೆಂದರೆ ಇದು ನಮ್ಮ ಸರ್ಕಾರಕ್ಕೆ ಸವಾಲಿನ ಪ್ರಶ್ನೆ. ಮತ್ತೆ ಅವನು ಕೇಳಿದ ಡಿಮ್ಯಾಂಡ್ ಬಗ್ಗೆ ಏನು ಯೋಚನೆ ಮಾಡಿದ್ದೀರ?

ಸರ್, ಚಾರ್ಟರ್ಡ್ ವಿಮಾನ ಒಂದನ್ನು ಅರೇಂಜ್ ಮಾಡಿ, ಮಿಕ್ಕಿದ್ದನ್ನು ನಾನು ನೋಡಿಕೊಳ್ಳುತ್ತೇನೆ.

ಅಭಿಮನ್ಯು, ವಿಮಾನದ ವ್ಯವಸ್ಥೆ ನಾನು ಮಾಡುತ್ತೇನೆ, ಆದರೆ ಅಷ್ಟು ದೊಡ್ಡ ಮೊತ್ತದ ಹಣ ಹೇಗೆ? ಮತ್ತು ಇನ್ನೊಂದು ವಿಷಯ ಅಭಿಮನ್ಯು... ಯಾವುದೇ ಕಾರಣಕ್ಕೂ ಯಾವುದೇ ಪ್ರಾಣ ಹಾನಿ ಆಗಬಾರದು...

ಸರ್... ನೀವು ನನಗೆ ಒಂದು ವಿಶೇಷವಾದ ಅಧಿಕಾರ ಕೊಡುತ್ತೇನೆ ಎಂದರೆ, ಅಲ್ಲಿರುವ ಒಂದೇ ಒಂದು ಮಗುವಿನ ಪ್ರಾಣ ಹಾನಿ ಆಗದಂತೆ ನೋಡಿಕೊಳ್ಳುತ್ತೇನೆ.

ಅಭಿಮನ್ಯು ಹೇಳಿ ಅದೇನದು?

ಸರ್, ದುಷ್ಕರ್ಮಿಗಳನ್ನು ಹಿಡಿದು ಅವರ ಬಳಿ ವೈರಸ್ ಗೆ ಔಷಧಿಯನ್ನು ವಶ ಪಡಿಸಿಕೊಂಡ ಬಳಿಕ ಅವರನ್ನು ನಾನು ಎನ್ಕೌಂಟರ್ ನಲ್ಲಿ ಮುಗಿಸಲು ಅನುಮತಿ ಬೇಕು.

ಅಭಿಮನ್ಯು, ಏನು ನೀವು ಹೇಳುತ್ತಿರುವುದು? ಅಂಥಹ ದುಷ್ಕರ್ಮಿಯನ್ನು ಯಾವುದೇ ವಿಚಾರಣೆ ಇಲ್ಲದೆ ಮುಗಿಸುವುದ? ಸಾಧ್ಯವೇ ಇಲ್ಲ.. ಅದೂ ಅಲ್ಲದೆ ಅವನು ವಿದೇಶೀ ಪ್ರಜೆ... ಅಂಥದ್ದರಲ್ಲಿ ನೀವೇನಾದರೂ ಹಾಗೆ ಮಾಡಿದರೆ ಅದರ ಜವಾಬ್ದಾರಿ ಸರ್ಕಾರ ಹೊರಬೇಕಾಗುತ್ತದೆ... ಅದು ಸಾಧ್ಯವಿಲ್ಲ...

ಸರ್... ಇಲ್ಲ ಸರ್, ಅವನ ಬಳಿ ಕೆಲಸವಾದ ಕೂಡಲೇ ನಾನು ಅವನನ್ನು ಮುಗಿಸಲು ಅನುಮತಿ ಕೊಟ್ಟರೆ ಮಾತ್ರ ನಾನು ಕಾರ್ಯಾಚರಣೆಯನ್ನು ನಡೆಸಲು ಒಪ್ಪಿಕೊಳ್ಳುತ್ತೇನೆ ಇಲ್ಲವಾದಲ್ಲಿ ನಾನು ಇದರ ನೇತೃತ್ವ ವಹಿಸಿಕೊಳ್ಳುವುದಿಲ್ಲ. ಸರ್, ಪ್ರತಿಸಲ ರೀತಿ ಏನಾದರೂ ನಡೆದಾಗ ನಾವುಗಳು ನಮ್ಮ ಪ್ರಾಣವನ್ನೂ ಲೆಕ್ಕಿಸದೆ ಹೋರಾಡಿ ದುಷ್ಕರ್ಮಿಗಳನ್ನು ಬಂಧಿಸಿದರೆ, ಸರ್ಕಾರ ಅವರನ್ನು ವಿಚಾರಣೆ ಎನ್ನುವ ಹೆಸರಲ್ಲಿ ವರ್ಷಗಟ್ಟಲೆ ಅವರಿಗೆ ಎಲ್ಲಾ ಸವಲತ್ತನ್ನು ಕೊಟ್ಟು ಅವರನ್ನು ಎಮ್ಮೆ ಮೇಯಿಸಿದ ಹಾಗೆ ಸಾಕುತ್ತದೆ. ಅವನಿಗೆ ಶಿಕ್ಷೆ ಆಗುವಷ್ಟರಲ್ಲಿ ಒಂದು ಅವನಿಗೆ ವಯಸಾಗಿರುತ್ತದೆ, ಇಲ್ಲವಾದರೆ ಅವನು ಜೈಲಿನ ವಾತಾವರಣಕ್ಕೆ ಒಗ್ಗಿ ಹೋಗಿರುತ್ತಾನೆ. ಇಲ್ಲವಾದರೆ ಸರಿಯಾದ ಸಾಕ್ಷಿ ಪುರಾವೆಗಳು ಇಲ್ಲವೆಂದು ಅವನನ್ನು ಬಿಡುಗಡೆ ಮಾಡಿ ಬಿಡುತ್ತದೆ... ಇಲ್ಲವಾದರೆ ಇವನನ್ನು ಬಿಡಿಸಿಕೊಳ್ಳಲು ಮತ್ತೊಬ್ಬ ಇನ್ನೊಂದಷ್ಟು ಜನರನ್ನು ಕಿಡ್ನಾಪ್ ಮಾಡುತ್ತಾನೆ ಇಲ್ಲವಾದರೆ ಸಾಯಿಸೇ ಬಿಡುತ್ತಾನೆ....

ಅದಕ್ಕೆ ರೀತಿ ಆಗುವುದಕ್ಕೆ ನಾನು ಬಿಡುವುದಿಲ್ಲ... ಈಗ ಹೇಳಿ ನನಗೆ ಅನುಮತಿ ಕೊಡುತ್ತೀರಾ? ಅಥವಾ...
ಅಭಿಮನ್ಯು....ನನಗೆ ಸ್ವಲ್ಪ ಕಾಲಾವಕಾಶ ಬೇಕು, ನಾನು ಇದರ ಬಗ್ಗೆ ಮುಖ್ಯಮಂತ್ರಿಗಳ ಬಳಿ ಮಾತಾಡಿ ನಂತರ ನಿಮಗೆ ವಿಷಯ ತಿಳಿಸುತ್ತೇನೆ..

ಸರ್, ಇಲ್ಲಿ ನಮಗೆ ಹೆಚ್ಚು ಸಮಯವಿಲ್ಲ... ನಾವು ತಡ ಮಾಡಿದಷ್ಟು ಅಲ್ಲಿ ಮಕ್ಕಳ ಜೀವಕ್ಕೆ ಅಪಾಯ... ನೀವು ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿದ್ದರೂ ಇನ್ನೊಂದು ಘಂಟೆಯಲ್ಲಿ ನನಗೆ ತಿಳಿಸಿ... ನಿಮ್ಮ ನಿರ್ಧಾರದ ಮೇಲೆ ನನ್ನ ನಿರ್ಧಾರ ಅವಲಂಬಿತವಾಗಿರುತ್ತದೆ.

ಅಭಿ ನೀವು ನನ್ನನ್ನು ಇಕ್ಕಟ್ಟಿನಲ್ಲಿ ಸಿಲುಕಿಸುತ್ತಿದ್ದೀರ...

ಸರ್... ಒಂದೇ ಒಂದು ಸಲ ಯೋಚನೆ ಮಾಡಿ ಸರ್, ಅಲ್ಲಿ ಬಂಧಿತರಾಗಿರುವ ಮಕ್ಕಳಲ್ಲಿ ನಿಮ್ಮ ಮಕ್ಕಳೇನಾದರೂ ಇದ್ದಿದ್ದರೆ, ಅಥವಾ ನಿಮ್ಮನ್ನೇ ಅವರು ಕಿಡ್ನಾಪ್ ಮಾಡಿದ್ದಿದ್ದರೆ ಆಗಲೂ ನಿಮ್ಮ ಸರ್ಕಾರ ಹೀಗೆಯೇ ಹೇಳುತ್ತಿತ್ತ? ಅಥವಾ ಹೀಗೆ ಹೇಳಿದ್ದಿದ್ದರೆ ನಿಮ್ಮ ಪರಿಸ್ಥಿತಿ ಹೇಗಿರುತ್ತಿತ್ತು... ಸರ್ ತಾಜ್ ಹೋಟೆಲಿನ ಮೇಲೆ ದಾಳಿ ಮಾಡಿದ ಕಸಬ್ ನನ್ನು ಎಷ್ಟು ವರ್ಷ ಎಷ್ಟು ಕೋಟಿ ಖರ್ಚು ಮಾಡಿ ಸಾಕಿ ಸಾಧಿಸಿದ್ದೇನು? ಅಸೆಂಬ್ಲಿ ಮೇಲೆ ದಾಳಿ ನಡೆಸಿದ ಅಫ್ಜಲ್ ನನ್ನು ಗಲ್ಲಿಗೇರಿಸಲು ಅಷ್ಟು ವರ್ಷ ಬೇಕಾಯಿತ? ಸರ್, ಒಂದು ವೇಳೆ ಇದೆ ರೀತಿ ವಿದೇಶಗಳಲ್ಲಿ ಆಗಿದ್ದಿದ್ದರೆ ಯಾವುದೇ ಮುಲಾಜಿಲ್ಲದೆ ಹೊಡೆದು ಮುಗಿಸುತ್ತಿದ್ದರು... ನಮ್ಮ ದೇಶದಲ್ಲಿ ಏಕೆ ಸರ್ ಹೀಗೆ....

ಸರ್, ಅದೆಲ್ಲಾ ಬೇಡ ಈಗ ನಿಮ್ಮ ನಿರ್ಧಾರ ಹೇಳಿ Yes or No...

ಒಂದು ದೀರ್ಘ ನಿಟ್ಟುಸಿರು ಬಿಟ್ಟ ಮಂತ್ರಿಗಳು ಅಭಿಮನ್ಯು, ನೀವು ನಿಮ್ಮ ಕಾರ್ಯಾಚರಣೆ ಮುಂದುವರೆಸಿ.. ಆದರೆ ಇಲ್ಲಿ ನಿರ್ಧಾರವಾಗಿರುವ ವಿಷಯ ಯಾವುದೇ ಕಾರಣಕ್ಕೂ ನಮ್ಮಿಷ್ಟು ಜನರ ನಡುವೆ ಮಾತ್ರ ಇರಬೇಕು... ಆಮೇಲೆ ಇನ್ನೊಂದು ವಿಷಯ, ನಿಮ್ಮ ಕಾರ್ಯಾಚರಣೆ ನಂತರ ಅವನನ್ನು ಮುಗಿಸಲು ನಿಮಗೆ ಎಷ್ಟು ಸಮಯ ಬೇಕು...

ಸರ್.... ನನ್ನ ಪ್ಲಾನಿನ ಪ್ರಕಾರ ಎಲ್ಲಾ ನಡೆದರೆ ನಾನು ಕಾರ್ಯಾಚರಣೆಗೆಂದು ಸ್ಕೂಲಿನ ಒಳಗೆ ಹೋದರೆ ಮತ್ತೆ ಆಚೆ ಬರುವಷ್ಟರಲ್ಲಿ ಎಲ್ಲಾ ಕೆಲಸ ಮುಗಿಸೇ ಬರುತ್ತೇನೆ. ಅದರ ಬಗ್ಗೆ ನೀವೇನೂ ಚಿಂತಿಸಬೇಡಿ...

ಸರಿ ಹಾಗಿದ್ದರೆ ನೀವು ಕೂಡಲೇ ನಿಮ್ಮ ಕೆಲಸ ಶುರು ಮಾಡಿ... All the Best...

No comments:

Post a Comment